ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ

ರಾಜ್ಯ

ಗೋವಿಂದ ಕಾರಜೋಳ‌ ಅವರನ್ನು ಗೆಲ್ಲಿಸಿದರೆ ನನ್ನನ್ನೆ ಗೆಲ್ಲಿಸಿದಂಗೆ, ಮುಂದಿನ ದಿನಗಳಲ್ಲಿ ಮದಕರಿ‌ ಉತ್ಸವ ಮಾಡುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ವೀರಶೈವ ಲಿಂಗಾಯಿತ ಮುಖಂಡರ ಸಭೆ ಉದ್ಘಾಟಿಸಿ ಮಾತಾಡಿದರು.
ಅಪ್ಪರ್ ಭದ್ರಾಗೆ 5300 ಕೋಟಿ ಹಣವನ್ನು  ಕೊಡಲು ವಿಳಂಬವಾಗಿದೆ. ಆದರೆ ನಾನು ಈ‌ ಹಣ ತರಲು ಮುಂದಾಗುತ್ತೇನೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅವರಲ್ಲಿ‌ ಯಾರಾದ್ರೂ ಹೇಳಲಿ, ಮುಂದಿನ‌ ಪ್ರಧಾನಿಯಾಗುವ ಅಭ್ಯರ್ಥಿಯಾರೆಂದು, ಆದರೆ ಅವರಲ್ಲಿ‌ ಯಾರೂ ಇಲ್ಲ, ಆದ್ದರಿಂದ ಅವರು ಹೇಳಲ್ಲ. ನಾನು ರೈತರಿಗೆ ನಾಲ್ಕು ಸಾವಿರ ಹಣ ಕೊಡುತ್ತಿದ್ದೆ, ಅದನ್ನು ಸಿದ್ದರಾಮಯ್ಯ ಸರ್ಕಾರ ನಿಲ್ಲಿಸಿತು ಯಾಕೆ? ಭಾಗ್ಯ ಲಕ್ಷ್ಮಿ ಯೋಜನೆ ನಿಲ್ಲಿಸಿದರು. ದುಡ್ಡಿಲ್ಲದೆ ದಿವಾಳಿಯಾಗಿದ್ದೀರಾ ನೀವು, ಈ ಸರ್ಕಾರ ರೈತ ವಿರೋಧಿ‌ ಸರ್ಕಾರ, ಹಣ, ಹೆಂಡ, ತೋಳ್ಬಲ ಬಲದಿಂದ ಜಾತಿಯ ವಿಷ ಬೀಜ ಬಿತ್ತಿ, ಚುನಾವಣೆಯಲ್ಲಿ‌ ಗೆಲ್ಲಬಹುದು ಎಂಬ ಭ್ರಮೆಯಲ್ಲಿ‌ ನೀವಿದ್ದೀರಿ, ಈ ರಾಜಕೀಯ ದೊಂಬರಾಟ ಇನ್ನು ಮುಂದೆ ನಡೆಯೊಲ್ಲ, ಮತದಾರ ಜಾಗೃತನಾಗಿದ್ದಾನೆ. ಯಾವುದು ಸರಿ ತಪ್ಪ ಎಂದು ಗೊತ್ತಾಗಿದೆ ಎಂದರು. ಮೋದಿ‌ ಮುಂದೆ ಮತ್ತೊಬ್ಬರ ಹೆಸರೇಳಲು ಕಾಂಗ್ರೆಸ್ ಗೆ ಧೈರ್ಯ ಇಲ್ಲ. ಚುನಾವಣೆ ಗೂ ಮುನ್ನವೇ ಸೋಲನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಮ್ಮ ಏಕೈಕ‌ ನಾಯಕ ನರೇಂದ್ರ ಮೋದಿ, ಎಲ್ಲಿ‌ ಹೋದರೂ‌ ಮೋದಿ ಎಂದು ಹೇಳುತ್ತಿದ್ದಾರೆ.‌ ಬಿಜೆಪಿ‌ ಜೆಡಿಎಸ್ ಹೊಂದಾಣಿಕೆಯಲ್ಲಿ ಕೆಲಸ ಮಾಡುತ್ತಿದೆ.‌ಇದನ್ನು ತಡೆಯಲು ಯಾರಿಂದಲೂ‌ ಸಾಧ್ಯವಿಲ್ಲ. ನೀವು ಕೊಟ್ಟಿರುವ ಭರವಸೆಯಂತೆ ಮನೆ ಮನಗೆ ತೆರಳಿ‌ ಮತದಾರರನ್ನು‌ ಕರೆ ತಂದು‌ ಮತ ಹಾಕಿಸಿ ಗೋವಿಂದ ಕಾರಜೋಳ‌ ಅವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.ಗೋವಿಂದ ಕಾರಜೋಳ ಮಾತಾಡಿ, 60 ವರ್ಷಗಳ ಕಾಂಗ್ರೆಸ್ ದುರಾಡಳಿತ, ನೋಡಿದ ದೇಶದ ಜನರು ಬೇಸತ್ತಿದ್ದಾರೆ. ಇದೀಗ ಹತ್ತು ವರ್ಷಗಳಿಂದ ಮೋದಿ‌ ಆಡಳಿತದಲ್ಲಿ ಸಂತಸದಿಂದ ಇದ್ದಾರೆ. ಮೋದಿ ಅವರು ಜಗತ್ತು ಕಂಡ ಅತ್ಯುತ್ತಮ ನಾಯಕರಾಗಿದ್ದಾರೆ. ನಾನು ಟಿಕೆಟ್ ಬೇಡ ಎಂದಿದ್ದೆ, ಆದರೆ ನೀನೆ ಆಗಬೇಕು ಎಂದು ಯಡಿಯೂರಪ್ಪ ಹೇಳಿದ್ದರಿಂದ ನಾನು ಮತ್ತೆ ಕ್ಷೇತ್ರಕ್ಕೆ ಬಂದಿದ್ದೇನೆ. ನನಗೆ ಒಂದೇ ಕನಸು ಅಪ್ಪರ್ ಭದ್ರಾ ಯೋಜನೆ ಪೂರ್ಣಗೊಳಿಸಬೇಕು.‌ಇದಕ್ಕಾಗಿ 5300 ಕೋಟಿ‌ ಹಣವನ್ನು ತರಬೇಕು. ಚಿತ್ರದುರ್ಗವನ್ನು ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಇದಕ್ಕಾಗಿ ನನಗೊಂದು ಅವಕಾಶ ಕೊಟ್ಟು, ಮೋದಿ ಅವರ ಜೊತೆ ಇರಲು ನನ್ನನ್ನು ಗೆಲ್ಲಿಸಬೇಕೆಂದರು. ಬೀಳಗಿ ಕ್ಷೇತ್ರದ ಮಾಜಿ ಶಾಸಕ ಮುರಿಗೇಶ್ ನಿರಾಣಿ ಮಾತಾಡಿ,ಮುಧೋಳನ್ನು ಅತ್ಯಂತ ಅಭಿವೃದ್ದಿ ಮಾಡಿದ್ದಾರೆ. ಒಂದು ಗುಂಟೆ ಜಮೀನು ಬಿಡದೆ, ಎಲ್ಲವನ್ನು ನೀರಾವರಿಯನ್ನಾಗಿ‌ ಮಾಡಿದ್ದಾರೆ. ಇನ್ನು ಮುಧೋಳ‌ ಪಟ್ಟಣವನ್ನು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ದಿ ಮಾಡಿದ್ದು, ಇದೀಗ ಚಿತ್ರದುರ್ಗಕ್ಕೆ ಬಂದು ಸ್ಪರ್ಧೆ ಮಾಡಿರುವುದು ಒಂದು ಸೌಭಾಗ್ಯ, ಆದ್ದರಿಂದ ನೀವುಗಳು ಒಂದು ಬಾರಿ ಅವರನ್ನು ಗೆಲ್ಲಿಸಿದರೆ, ಅವರು ಮೋದಿ ಅವರ ಜೊತೆ ಉನ್ನತ ಹುದ್ದೆಯಲ್ಲಿರುತ್ತಾರೆ. ನಂತರ ನೀವೆ ಅವರನ್ನು ಮತ್ತೆ ಗೆಲ್ಲಿಸುತ್ತೀರಾ, ಅಂತಹ ಅಭಿವೃದ್ದಿಯನ್ನು ಮಾಡುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ ಎಸ್ ನವೀನ್, ನೇರ್ಲಗುಂಟೆ ತಿಪ್ಪೇಸ್ವಾಮಿ, ಎಸ್ ಕೆ ಬಸವರಾಜನ್, ಮುಖಂಡರಾದ ಕೆ ಟಿ ತಿಪ್ಪೇಸ್ವಾಮಿ ಇತರರಿದ್ದರು.

 

 

 

Leave a Reply

Your email address will not be published. Required fields are marked *