ಗಣೇಶ ಹಬ್ಬದಂದು ಗಂಧದ ಗುಡಿ ಚಿತ್ರದ ಹೊಸ ಪೋಸ್ಟರ್ ರಿಲೀಸ್; ಸಿನಿಮಾ ಬಿಡುಗಡೆ ದಿನಾಂಕವೂ ಫಿಕ್ಸ್ ಆಗಿದೆ!!!
ಗಣೇಶ ಹಬ್ಬದ ದಿನ ಆನೆಯ ಮುಂದೆ ಪವರ್‌ಸ್ಟಾರ್ ನಿಂತಿರೋ ಫೋಟೊವನ್ನು ಪಿಆರ್‌ಕೆ ಸಂಸ್ಥೆ ರಿಲೀಸ್ ಮಾಡಿದೆ. ಗಂಧದ ಗುಡಿಯ ಈ ಪೋಸ್ಟರ್ ಅಪ್ಪು ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.ಗಣೇಶ ಚತುರ್ಥಿಯಂದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಶುಭ ಸಮಾಚಾರ ನೀಡಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ, ಈ ಚಿತ್ರ ನೋಡಲು ಇಡೀ ಕರುನಾಡೇ ಕಾದು ಕುಳಿತಿದೆ. ಪುನೀತ್ ನೆನಪಲ್ಲಿ ಹಬ್ಬ ಆಚರಿಸುತ್ತಿರೋ ಅಭಿಮಾನಿಗಳಿಗಾಗಿ ಹಬ್ಬದ ಉಡುಗೊರೆಯಾಗಿ ಕೊಟ್ಟಿರೋ ಚಿತ್ರ ತಂಡ ಗಂಧದ ಗುಡಿ ಹೊಸ ಪೋಸ್ಟರ್ ಬಿಡುಗಡೆ ಜೊತೆಗೆ ಚಿತ್ರದ ರಿಲೀಸ್ ದಿನಾಂಕವನ್ನು ಸಹ ಘೋಷಣೆ ಮಾಡಿದೆ. ಅಕ್ಟೋಬರ್ 28ರಂದು ಗಂಧದ ಗುಡಿ ಚಿತ್ರ ತೆರೆಮೇಲೆ ಬರಲಿದೆ ಎಂದು ಘೋಷಣೆ ಮಾಡಲಾಗಿದೆ.
ಅಪ್ಪು ನೆನಪಲ್ಲಿ ಗಣೇಶ ಚತುರ್ಥಿ
ನಾಡಿನಲ್ಲಿ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದ್ದು, ಎಲ್ಲೆಲ್ಲೂ ಗಣೇಶನ ಮೂರ್ತಿಗಳನ್ನು ಇಟ್ಟು ಪೂಜೆ ಮಾಡೋದು ಸಾಮಾನ್ಯ, ಈ ವರ್ಷ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ದುಃಖದಲ್ಲಿರೋ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪವರ್ ಸ್ಟಾರ್ರನ್ನು ನೆನಪು ಮಾಡಿಕೊಳ್ತಿದ್ದಾರೆ. ಅಪ್ಪು ಪ್ರತಿಮೆ ಇರೋ ಗಣೇಶನ ಮೂರ್ತಿಗಳನ್ನು ತಂದು ಪೂಜೆ ಮಾಡಿ ಗೌರವ ಸಲ್ಲಿಸುತ್ತಾರೆ.
ಗಂಧದ ಗುಡಿ ಹೊಸ ಪೋಸ್ಟರ್ ರಿಲೀಸ್
ಮತ್ತೊಂದೆಡೆ ಟ್ವಿಟರ್ನಲ್ಲಿ ಗಣೇಶ ಚತುರ್ಥಿ ಹಿನ್ನೆಲೆ ಪುನೀತ್ ಚತುರ್ಥಿ ಟ್ರೆಂಡ್ ಶುರುವಾಗಿದೆ. ಇದೇ ವೇಳೆ ಪಿಆರ್‌ಕೆ ಪ್ರೊಡೆಕ್ಷನ್ ಗಂಧದ ಗುಡಿ ಹೊಸ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.
ಅಪ್ಪು ಕನಸು ನನಸು ಮಾಡ್ತಿರೋ ಅಶ್ವಿನಿ
ಪವರ್‌ಸ್ಟಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ, ಅವರದ್ದೇ ಪಿಆರ್‌ಕೆ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿತ್ತು. ಆದರೆ, ಈ ಸಿನಿಮಾವನ್ನು ನೋಡುವ ಮೊದಲೇ ಅಪ್ಪು ಅಗಲಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊತ್ತಿದ್ದು. ಅಪ್ಪು ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ. ಆನೆಯ ಮುಂದೆ ಪವರ್‌ಸ್ಟಾರ್ ನಿಂತಿರೋ ಫೋಟೊವನ್ನು ಪಿಆರ್‌ಕೆ ಸಂಸ್ಥೆ ರಿಲೀಸ್ ಮಾಡಿದೆ. ಗಂಧದ ಗುಡಿಯ ಈ ಪೋಸ್ಟರ್ ಅಪ್ಪು ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಅಕ್ಟೋಬರ್ 28ಕ್ಕೆ ಚಿತ್ರ ರಿಲೀಸ್
ಗಂಧದ ಗುಡಿ ಸಿನಿಮಾ ಅಕ್ಟೋಬರ್ 28ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಸಿನಿಮಾದ ರಿಲೀಸ್ ಡೇಟ್ ಕೂಡ ಘೋಷಣೆ ಮಾಡಿದ್ದಾರೆ. ಇದೇ ಅಕ್ಟೋಬರ್ 29ಕ್ಕೆ ಪುನೀತ್ ರಾಜ್‌ಕುಮಾರ್ ಅವರು ಅಭಿಮಾನಿಗಳನ್ನು ಅಗಲಿ ಒಂದು ವರ್ಷ ಆಗಲಿದೆ. ಅದಕ್ಕೂ ಒಂದು ದಿನ ಮೊದಲೇ ಪವರ್‌ಸ್ಟಾರ್ ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಗಂಧದ ಗುಡಿ ಮೂಲಕ ಪುನೀತ್ ರಾಜ್‌ಕುಮಾರ್ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರ ಮಾಡಿದ ‘ಲಕ್ಕಿ ಮ್ಯಾನ್’ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ. ಹೀಗಾಗಿ ಅವರ ಕೊನೆಯ ಚಿತ್ರ ಎಂದರೆ ‘ಗಂಧದ ಗುಡಿ’. ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ದಿನಾಂಕಕ್ಕಿಂತ ಒಂದು ದಿನ ಮೊದಲು ರಿಲೀಸ್ ಆಗುತ್ತಿದೆ.