ಸರ್ಕಾರ ಚಳ್ಳಕೆರೆ ತಾಲೂಕನ್ನು ನಿರ್ಲಕ್ಷ ಮಾಡುತ್ತಿದೆ

ಜಿಲ್ಲಾ ಸುದ್ದಿ

ಚಳ್ಳಕೆರೆ ಮತ್ತು ಮೊಳಕಾಲ್ಮೂರು ಭಾಗಗಗಳಲ್ಲಿ ಹತ್ತಕ್ಕೂ ಹೆಚ್ಚು ಗೋಶಾಲೆಗಳನ್ನು ಮಾಡಿದ್ದು ಜಿಲ್ಲೆಯಲ್ಲಿ ಮೂರರಿಂದ ನಾಲ್ಕು ಸಾವಿರ ಗೋವುಗಳನ್ನು ಸಾಕುವ ಸಂದರ್ಭವಿತ್ತು. ಆದರೆ ಇದೀಗ ಮೇವಿನ ಬರ ನೀಗಿದೆ ಎಂದು ಶಾಸಕ ರಘುಮೂರ್ತಿ ಹೇಳಿದರು.
ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಚಳ್ಳಕೆರೆ ತಾಲೂಕು ಕುರುಡಿಹಳ್ಳಿ ಗ್ರಾಮದಲ್ಲಿ ನಡೆದ ಪುಣ್ಯಕೋಟಿ ಸರ್ಕಾರಿ ಗೋಶಾಲೆ ಉದ್ಘಾಟಿಸಿ ಮಾತನಾಡಿದರು.
ಆಗಿನ ಸಂದರ್ಭದಲ್ಲಿ ಮೇವಿನ ಅನಿವಾರ್ಯತೆ ಎಷ್ಟಿತ್ತು ಎಂದು ಅನುಭವಿಸಿದ ಜನಪ್ರತಿನಿಧಿಗಳು ಹಾಗೂ ರೈತರಿಗೆ ಮಾತ್ರ ಗೊತ್ತು, ಆದರೆ ಇದೀಗ ಅಂತಹ ಸಮಸ್ಯರ ಇಲ್ಲ, ವೇದಾವತಿ ನದಿ ಹಾಗೂ ವಾಣಿ ವಿಲಾಸ ಸಾಗರ ತುಂಬಿದೆ. ಇದರಿಂದ ಕಷ್ಟಗಳು ಕಡಿಮೆಯಾದರೂ ಕೂಡ ಸರ್ಕಾರ ಜಾರಿ ಮಾಡಿತುವ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ್ದು, ಇದರಂತೆ ವಯಸ್ಸಾದ ಹಾಗೂ ಉಪಯೋಗಕ್ಕೆ ಬಾರದ ಜಾನುವಾರುಗಳನ್ನು ತಂದು ಗೋಶಾಲೆಗೆ ಬಿಟ್ಟು ಅವುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿದೆ. ಇದಕ್ಕಾಗಿ ಗೋಶಾಲೆ ಯಾಗಿದೆ. ಸರ್ಕಾರ ಈ ಗೋಶಾಲೆಯನ್ನು ಇಷ್ಟು ಪಟ್ಟು ನಮಗೆ ಕೊಟ್ಟಿಲ್ಲ ಅನಿವಾರ್ಯ ಕಾರಣಗಳಿಂದ ನಮಗೆ ಕೊಟ್ಟಿದ್ದಾರೆ, ಬೇರೆ ಬೇರೆ ಯೋಜನೆಗಳು ಉಳಿದ ಐದು ಜಿಲ್ಲೆಗಳಿಗೆ ನೀಡಿದರೂ ಕೂಡ ನಮ್ಮ‌ತಾಲೂಕಿಗೆ ನೀಡಿಲ್ಲ ಆದರೆ ಇದು ರಾಜಕೀಯ ಮಾಡಲು ಬರದೆ ಅನಿವಾರ್ಯ ಕಾರಣಗಳಿಗೆ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಸ್ವಾಮಿ, ಉಪಾಧ್ಯಕ್ಷರಾದ ಶಿಲ್ಪಾ ವೆಂಕಟೇಶ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಿವಾಕರ್, ಕಾರ್ಯಪಾಲಕ ಅಭಿಯಂತರರಾದ ಹನುಮಂತಪ್ಪ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರಾದ ಡಾ. ಕೆ ಎಸ್ ಕಲ್ಲಪ್ಪ, ಕಾರ್ಯಪಾಲಕ ಅಭಿಯಂತರಾದ ಶಿವಪ್ರಕಾಶ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬುರೆಡ್ಡಿ, ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ತಿಪ್ಪೇಶ್ ರೆಡ್ಡಿ, ಮುಖಂಡರುಗಳಾದ ರಾಮಸ್ವಾಮಿ, ಮುಖಂಡರು, ಕಾರ್ಯಕರ್ತರ ಮತ್ತು ಸಾರ್ವಜನಿಕರು ಉಪಸಿದ್ಧರಿದ್ದರು.

 

 

 

Leave a Reply

Your email address will not be published. Required fields are marked *