ಶ್ರೀ ಇಮ್ಮಡಿ ಸಿದ್ದರೇಶ್ವರ ಸ್ವಾಮೀಜಿಯಿಂದ ಸಿಎಂಗೆ ಕೃತಜ್ಞತೆ

ರಾಜ್ಯ

ತಲತಲಾಂತರಗಳಿಂದ ಶೋಷಣೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಸಮಾನತೆಯಿಂದ ಹಿಂದುಳಿದಿರುವಿಕೆಯ ಸಮುದಾಯಗಳ ಅಭಿವೃದ್ಧಿಗಾಗಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ದಿಟ್ಟ ಹಾಗೂ ನಿರಂತರ ಹೋರಾಟದ ಫಲವಾಗಿ ಮೀಸಲಾತಿ ಹೆಚ್ಚಿಸಿರು ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿರುವ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಸ್ವಾಗತಿಸಿದ್ದಾರೆ.

 

 

 

ಹಲವಾರು ದಶಕಗಳಿಂದ ನಾನಾ ಸಂಘಟನೆಗಳು ಹೋರಾಟ ನಡೆಸುತ್ತಾ ಬಂದಿವೆ, ಸಂಘಟನೆಗಳ ಆಶಯ ಮತ್ತು ಹೋರಾಟದ ಹಿನ್ನೆಲೆಯಲ್ಲಿ ಅನೇಕ ಚಿಂತಕರು ಸಮಾಜ ಸುಧಾರಣೆ ಕುರಿತಾದ ಚಿಂತನೆಗಳಲ್ಲಿ ಶೋಷಿತ ಸಮುದಾಯಗಳಿಗೆ ಮೀಸಲಾತಿಯಂತಹ ಅವಕಾಶಗಳನ್ನು ಕಲ್ಪಿಸಬೇಕೆಂಬ ಹೋರಾಟ ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ಶೋಷಿತ ಸಮುದಾಯಗಳು ಅಕ್ಷರ ಸೇರಿದಂತೆ ಎಲ್ಲಾ ರೀತಿಯ ಅವಕಾಶಗಳಿಂದ ವಂಚಿತವಾಗಿ ಅಸಮಾನತೆಯ ಜೀವನವನ್ನ ಸಾಗಿಸುತ್ತಾ ಬಂದ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಅಭಿವೃದ್ಧಿಗೆ ಸ್ವಲ್ಪ ಮಟ್ಟಿನ ಪುಷ್ಠಿಯನ್ನ ನೀಡಿದಂತಾಗಿದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ರವರ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಆಧಾರದಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಆದರೆ ಇದನ್ನ ತುರ್ತಾಗಿ ಜಾರಿಗೊಳಿಸುವ ಮೂಲಕ ಶೋಷಿತ ಸಮುದಾಯಗಳ ಬದುಕಿನಲ್ಲಿ ಹೊಸ ಭರವಸೆಯನ್ನು ಸರ್ಕಾರಗಳು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *