ದೌರ್ಜನ್ಯಕ್ಕೊಳಗಾದವರಿಗೆ ಸರ್ಕಾರದಿಂದ ನಿವೇಶನ ನೀಡುವ ಭರವಸೆ

ಆರೋಗ್ಯ

ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕೆ ಕಳೆದ ಒಂದು ತಿಂಗಳ ಹಿಂದೆ ಯಾದವ ಮತ್ತು ದಲಿತ ಜನಾಂಗದ ನಡುವೆ ಗಲಾಟೆ ನಡೆದ ಆಯಿತೋಳು ಗ್ರಾಮಕ್ಕೆ ಸಮಾಜ ಕಲ್ಯಾಣಾಧಿಕಾರಿ ಗ್ರೇಡ್-1 ಓ.ಪರಮೇಶ್ವರಪ್ಪ ಮತ್ತು ಸಿಬ್ಬಂದಿಯವರು ಬುಧವಾರ ಭೇಟಿ ನೀಡಿ ಸಂತ್ರಸ್ಥರಿಗೆ ಆತ್ಮಸ್ಥೈರ್ಯ ತುಂಬಿದರು.
ಸಮಾಜ ಕಲ್ಯಾಣಾಧಿಕಾರಿ ಓ.ಪರಮೇಶ್ವರಪ್ಪ ಸಂತ್ರಸ್ಥರ ಮನೆಗಳಿಗೆ ಭೇಟಿ ನೀಡಿ ನಂತರ ಮಾತನಾಡಿ ಗ್ರಾಮದಲ್ಲಿ ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲರೂ ಸೌಹಾರ್ಧತೆಯಿಂದ ಬಾಳಬೇಕಾಗಿರುವುದರಿಂದ ಮೊದಲು ಸುಶಿಕ್ಷಿತರಾಗಬೇಕು. ಗ್ರಾಮದಲ್ಲಿ ನಿಮ್ಮ ನಿಮ್ಮ ಮನೆಗಳ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲವನ್ನು ಪಂಚಾಯಿತಿಯಿಂದ ನಿರೀಕ್ಷಿಸುವುದು ಸರಿಯಲ್ಲ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಿಗಬಹುದಾದ ಸೌಲಭ್ಯಗಳನ್ನು ತಲುಪಿಸುವ ಭರವಸೆ ನೀಡಿದರು.
ಶುದ್ದ ಕುಡಿಯುವ ನೀರು, ಸಿ.ಸಿ.ರಸ್ತೆ, ಚರಂಡಿ ನಿರ್ಮಿಸಲಾಗುವುದು. ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಲ್ಲಿ ಮನವಿ ಮಾಡಿದ ಓ.ಪರಮೇಶ್ವರಪ್ಪ ದಲಿತರಿಗೆ ಹಾಗೂ ದೌರ್ಜನ್ಯಕ್ಕೊಳಗಾದವರಿಗೆ ಸರ್ಕಾರಿ ಗೋಮಾಳದಲ್ಲಿ ನಿವೇಶನ ನೀಡುವ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದೆಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸದಾ ನಿಮ್ಮೊಂದಿಗಿದೆ. ಆಯಿತೋಳು ಗ್ರಾಮದಲ್ಲಿ ದಲಿತರು ಯಾದವರು ಇನ್ನಿತರೆ ಜನಾಂಗ ಸಾಮರಸ್ಯದಿಂದ ಬದುಕಬೇಕು. ಆಕಸ್ಮಿಕವಾಗಿ ಏನಾದರೂ ಘಟನೆಗಳು ಗ್ರಾಮದಲ್ಲಿ ನಡೆದಾಗ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನವನ್ನು ನೀವುಗಳೆ ಮಾಡಬೇಕು. ಎಲ್ಲರೂ ಸ್ವಾವಲಂಭಿಗಳಾಗಿ ದಬ್ಬಾಳಿಕೆ, ಶೋಷಣೆಗೆ ಅವಕಾಶ ಕೊಡಬಾರದು. ಮಕ್ಕಳನ್ನು ಮುರಾರ್ಜಿ ಶಾಲೆಗೆ ಸೇರಿಸಲಾಗುವುದು. ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಸಾಲ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆಯಿತ್ತರು.
ಎಸ್ಸಿ.ಎಸ್ಟಿ.ದೌರ್ಜನ್ಯ ತಡೆ ಕಾಯಿದೆ ಸಮಿತಿ ಉಪ ವಿಭಾಗ ಮಟ್ಟದ ಸದಸ್ಯರುಗಳಾದ ಅನಂತರಾಜು, ಕೋಟಿ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ದಲಿತ ಮುಖಂಡರುಗಳಾದ ಹನುಮಂತಪ್ಪ ದುರ್ಗ, ದೇವರಾಜ್, ರಾಜಣ್ಣ, ಬಾಳೆಕಾಯಿ ಶ್ರೀನಿವಾಸ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

 

 

Leave a Reply

Your email address will not be published. Required fields are marked *