ಡಿಟಿಎಸ್ ಚಾಣಾಕ್ಷ ನಡೆಗೆ ಬಿಜೆಪಿ ತೆಕ್ಕೆಗೆ ಧರ್ಮಪುರ ಗ್ರಾಪಂ ಅಧ್ಯಕ್ಷೆ ಸ್ಥಾನ

ಜಿಲ್ಲಾ ಸುದ್ದಿ

ಡಿಟಿಎಸ್ ಚಾಣಾಕ್ಷ ನಡೆ
ಬಿಜೆಪಿ ತೆಕ್ಕೆಗೆ ಧರ್ಮಪುರ ಗ್ರಾಪಂ ಅಧ್ಯಕ್ಷೆ ಸ್ಥಾನ

 

 

 

ಹಿರಿಯೂರು ಧರ್ಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಚುನಾವಣೆಯು ನಡೆಯಿತು.
ಚುನಾವಣೆಯಲ್ಲಿ ರಾಜ್ಯ ಪ್ರವರ್ಗ 1 ರ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಿಟಿ ಶ್ರೀನಿವಾಸ್ ಅವರ ಚಾಣಾಕ್ಷ ನಡೆ ಬಿಜೆಪಿಗೆ ಮುನ್ನಡೆ ಹಾಗೂ ಅಧ್ಯಕ್ಷ ಸ್ಥಾನ ಒಲಿಯುವಂತೆ ಮಾಡಿದೆ.

‌ಶ್ರೀನಿವಾಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ ರಾಧ ರವರು ಚುನಾವಣೆಯಲ್ಲಿ 10 ಮತಗಳನ್ನು ಪಡೆದು ಧರ್ಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಬಹಳ ಕುತೂಹಲ ಮೂಡಿಸಿದ ಚುನಾವಣೆಯಲ್ಲಿ 22 ಸದಸ್ಯರಿದ್ದು, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿದೇವಿ 9 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶ್ರೀಮತಿ ಮಂಜುಳಾ 3 ಮತಗಳನ್ನು‌ ಪಡೆದು ಮೂರನೇ ಸ್ಥಾನದಲ್ಲಿ‌ಉಳಿದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಾಭಲ್ಯವುಳ್ಳ ಈ ಹೋಬಳಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಸೋಲು ಕಹಿಯಾಗಿಸಿದೆ. ಇತ್ತ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಧಮ್ಮ ಹಾಗು ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು

Leave a Reply

Your email address will not be published. Required fields are marked *