ವಿಮೆ ಹಣಕ್ಕಾಗಿ ಅಧಿಕಾರಿಗಳಿಗೆ ಘೇರಾವ್ ಹಾಕಿದ ರೈತರು

ಜಿಲ್ಲಾ ಸುದ್ದಿ

ರೈತರ ಬೆಳೆ ವಿಮೆ ಕೊಡುವಲ್ಲಿ ತಾರತಮ್ಯವಾಗಿದೆ ನ್ಯಾಯ ಕೊಡಿಸಿ ಎಂದು ಕೇಳಲು ಬಂದಿದ್ದ ಸಮಯದಲ್ಲಿ ಅಲ್ಲಿಗೆ ಬಂದಿದ್ದ ವಿಮಾ ಕಂಪನಿಯ ನೌಕರನ್ನು ಹಿಡಿದು ಎಳೆದಾಡಿದ ಘಟನೆ ಯೂ ನಡೆಯಿತು.

 

 

 

ಚಿತ್ರದುರ್ಗದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರೈತರು ಕಡಲೆ ಬೆಳೆಗೆ ವಿಮೆಯನ್ನು ಕಟ್ಟಿದ್ದು, ಕೆಲ ರೈತರಿಗೆ ವಿಮೆಯ ಹಣವು ಬಂದಿದೆ. ಇನ್ನು ಕೆಲವರಿಗೆ ಬಂದಿಲ್ಲ‌ ಇದರಲ್ಲಿ ಸರ್ಕಾರ ಹಾಗೂ ಕೃಷಿ ಅಧಿಕಾರಿಗಳು ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು‌ ಆರೋಪಿಸಿ ಜಿಲ್ಲಾಧಿಕಾರಿ ಗೆ ದೂರು ನೀಡಿದರು. ಮನವಿ ಸ್ವೀಕರಿಸಲು ಬಂದಿದ್ದ ಜಿಲ್ಲಾಧಿಕಾರಿಯ ಮೇಲೂ ಬೀಳುವ ಪ್ರಸಂಗ ನಡೆಯಿತು. ಆದರೆ ಪಕ್ಕದಲ್ಲಿಯೇ ಇದ್ದ ಪೋಲಿಸರು ತಡೆದು ಅತ್ತ ಕಡೆಗೆ ನೂಕಿದರು. ಇ‌ನ್ನು ಮನವಿ ಸ್ವೀಕರಿಸಲು ಬಂದಿದ್ದ
ಜಿಲ್ಲಾಧಿಕಾರಿಗಳ ಮೇಲೂ‌ ಮುಗಿ ಬೀಳುವ ಹಂತಕ್ಕೆ ರೈತರು ಹೋಗಿದ್ದು ಪೋಲಿಸರು ‌ಆಗಬಹುದಾಗಿದ್ದ ಆನಾಹುತವ‌ನ್ನು ತಡೆದರು. ನಂತರ ಸಾವರಿಸಿಕೊಂಡು ಮಾತ‌ನಾಡಿದ ಜಿಲ್ಲಾಧಿಕಾರಿಗಳು ನಿಮಗೆ ಅನ್ಯಾವಾಗಿದ್ದರೆ ತಾಳ್ಮೆಯಿಂದ ಮಾತನಾಡಿ, ನಾನು ವಿಚಾರಣೆ ಮಾಡಿ ನಿಮಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದರು.ಇದಕ್ಕೂ ಮುನ್ನ ವಿಮಾ ಕಂಪನಿಯಿಂದ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ವಿಮಾ‌ ಕಂಪನಿಯ ರಾಕೇಶ್ ಎಂಬುವರನ್ನು ರೈತರು ಹಿಡಿದು ಎಳೆದಾಡಿದರು. ನಂತರ ಮುಗಿ‌ಬಿದ್ದು, ವಿಮೆ ಹಣವನ್ನು‌ ಕೊಡಿಸಬೇಕು, ವಾಪಾಸ್ಸು ಕಳುಹಿಸಿರುವ ಅರ್ಜಿಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ರೈತರಲ್ಲೆ ಕೆಲವರು ಹಾಗು ಪೋಲಿಸನವರು ರಾಕೇಶ್ ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟರು. ಪ್ರತಿಭಟನೆಯೂ ಗಲಭೆಗೆ ತಿರುಗುವ ಮುನ್ನ ಪೋಲಿಸರು ಪರಿಸ್ಥಿತಿ ಹತೋಟಿಗೆ ತಂದು ಸಖಾಂತ್ಯಗೊಳಿಸಿದರು.

ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *