ಕ್ರೀಡೆ ಮತ್ತು ಆಧ್ಯಾತ್ಮಿಕತೆ ಎರಡೂ ಬಳಸಿಕೊಂಡು ಬೆಳೆಯಬೇಕು

ಕ್ರೀಡೆ

ಕ್ರೀಡೆ ಶಿಕ್ಷಣದ ಒಂದು ಭಾಗವಾಗಿದ್ದು ಕ್ರೀಡೆಯ ಜೊತೆಗೆ ಆಧ್ಯಾತ್ಮ ಯೋಗದ ಶಿಕ್ಷಣವು ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ ಎಂದು ಚಳ್ಳಕೆರೆ ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಅವರು ತಳಕು ಗ್ರಾಮದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದರು.

 

 

 


ಕ್ರೀಡೆ ಮತ್ತು ಆಧ್ಯಾತ್ಮದಿಂದ ವಿದ್ಯಾರ್ಥಿಗಳು ತಮ್ಮ ಪರಿಪೂರ್ಣ ವಿದ್ಯಾರ್ಥಿ ಜೀವನವನ್ನು ಕಂಡುಕೊಳ್ಳಬೇಕೆಂದರು. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ ಇಂದಿನ ದಿನಗಳಲ್ಲಿ ಹದಿಹರೆಯರಿಂದ ವೃದ್ಧರವರೆಗೂ ಕೂಡ ಇವೆರೆಡು ಜೀವನದ ಅವಿಭಾಜ್ಯ ಅಂಗವಾಗಿದೆ ವಿದ್ಯಾರ್ಥಿಗಳು ವೈಫಲ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ನಿರ್ದಿಷ್ಟವಾದ ಗುರಿ ಮತ್ತು ಪರಿಶ್ರಮ ಬಹಳ ಮುಖ್ಯವಾದದ್ದು, ಮೈಕೆಲ್ ಪೇಲ್ಸ್ ಎರಡು ಕಾಲು ಇಲ್ಲದಿದ್ದರೂ ವಿಶ್ವದ ರಿಲೇ ಓಟದಲ್ಲಿ ಫೈನಲ್ ಗೆ ಬಂದಿದ್ದು ಸೇನಾ ನೇಹ್ವಾಲ್ ಅವರ ಆರಂಭದ ದಿನಗಳಲ್ಲಿ ವೈಫಲ್ಯದ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ಬಂದಾಗಿಯೂ ಕೂಡ ಜಗತ್ತಿನ ನಂಬರ್ ಒನ್ ಕ್ರೀಡಾ ತಾರೇಗಳಾಗ್ಗಿದ್ದು ಇವರುಗಳ ಆತ್ಮವಿಶ್ವಾಸದಿಂದ, ಆದುದರಿಂದ ಸೋಲುಗಳಿಗೆ ಮುಖ ಮಾಡದೆ ಗೆಲುವಿನ ನಗೆ ಬೀರಬೇಕು ಇಂದಿನ ಕ್ರೀಡಾಕೂಟ ವಿದ್ಯಾರ್ಥಿಗಳ ಭವಿಷ್ಯದ ಬದಲಾವಣೆಗೆ ದಿಕ್ಸೂಚಿ ಆಗಲಿ ಎಂದು ಶುಭ ಹಾರೈಸಿದರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದಂತಹ ಸುರೇಶ್ ಮಾತನಾಡಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಪೈಪೋಟಿ ಹಾಗೂ ನಾಯಕತ್ವದ ಗುಣ ಬೆಳೆಯುತ್ತದೆ ಪ್ರತಿಭೆಗಳನ್ನು ಓರೆ ಹಚ್ಚಲು ಈ ವೇದಿಕೆ ಸಹಕಾರಿಯಾಗಲಿದೆ ಶಿಕ್ಷಕರುಗಳು ಜವಾಬ್ದಾರಿಯಿಂದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಖಾನಂ ಉಪಾಧ್ಯಕ್ಷ ದ್ರಾಕ್ಷಾಯಿಣಮ್ಮ ಸದಸ್ಯರಾದಂತಹ ರವಿಕುಮಾರ್ ಕೃಷ್ಣಮೂರ್ತಿ ಶಾಂತ ಕುಮಾರ್ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *