ರಘು ಆಚಾರ್ ಗೃಹ ಪ್ರವೇಶದ ಮುಹೂರ್ತದಲ್ಲಿ ಉಚಿತ ಸಾಮೂಹಿಕ ವಿವಾಹ

ಜಿಲ್ಲಾ ಸುದ್ದಿ

ಜಿ.ರಘು ಆಚಾರ್ ಅವರ ಗೃಹ ಪ್ರವೇಶದ ಮುಹೂರ್ತದಲ್ಲಿ ಉಚಿತ ಸಾಮೂಹಿಕ ವಿವಾಹ-ಆರ್ ಪ್ರಸನ್ನ ಕುಮಾರ್

 

 

 

ನಗರದ ಹೊರವಲಯದಲ್ಲಿರುವ ಕ್ಯಾದಿಗೆರೆ ಸಮೀಪ ರಾ.ಹೆ 4ರ ಸರ್ವಿಸ್ ರಸ್ತೆ ಪಕ್ಕದಲ್ಲಿ ಜಿ.ರಘು ಆಚಾರ್ ಅವರು ನೂತನವಾಗಿ ನಿರ್ಮಾಣ ಮಾಡಿರುವ ಪ್ರಕೃತಿ ಗೃಹ ಪ್ರವೇಶ 2023ರ ಮಾರ್ಚ್ 10ರಂದು ನೆರವೇರಲಿದ್ದು ಅದೇ ದಿನ ಸಾಮೂಹಿಕ ವಿವಾ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಹೇಳಿದರು.
ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬರಗಾಲ, ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಕರೋನಾ ಮಹಾಮಾರಿಯಿಂದಾಗಿ ಜನರ ಜೀವನ ಅಸ್ತವ್ಯಸ್ಥವಾಗಿದೆ. ಅನೇಕ ಜನರು ತಮ್ಮ ಮಕ್ಕಳಿಗೆ ಮದುವೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಇದನ್ನು ಮನಗಂಡು ಜನರ ಸಂಕಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ರಘು ಆಚಾರ್ ಅವರು ಉಚಿತವಾಗಿ ಸಾಮೂಹಿಕ ವಿವಾಹ ಏರ್ಪಡಿಸಲು ಮುಂದಾಗಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ ಎಂದರು.
ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಇಚ್ಚಿಸುವ ವಧು-ವರರಿಗೆ ಭಾರತೀಯ ವಿವಾಹ ಕಾಯ್ದೆಯ ನಿಯಮದಂತೆ ಹೆಣ್ಣಿನ ವಯಸ್ಸು 18ವರ್ಷ, ಹಾಗು ಗಂಡಿನ ವಯಸ್ಸು 21 ವರ್ಷ ಮೇಲ್ಪಟ್ಟಿರಬೇಕು, ವಧು-ವರರು ಆಧಾರ್ ಕಾರ್ಡ್, ವಯಸ್ಸಿನ ಧೃಡೀಕರಣ ಪತ್ರ, ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ ಹಾಗು ಪೋಷಕರ ಒಪ್ಪಿಗೆ ಪತ್ರದೊಂದಿಗೆ ಮಾರ್ಚ್ 05ರ ಸಂಜೆ 6.00 ಗಂಟೆಯೊಳಗೆ ನೊಂದಣಿ ಮಾಡಿಸಬೇಕು. ಸಾಮೂಹಿಕ ವಿವಾಹದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿರಿಸುವ ಜೋಡಿಗಳಿಗೆ ಚಿನ್ನದ ಮಾಂಗಲ್ಯ, ಕಾಲುಂಗುರ, ವಧು-ವರರಿಗೆ ಸೀರೆ, ಶರ್ಟು, ಪಂಚೆ, ಶಲ್ಯ ಹಾಗು ನೂತನ ತಂತ್ರಜ್ಞಾನದ ಮಾರ್ಪಾಡು ಹೊಂದಿರುವ ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಸನ್ನಕುಮಾರ್ ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿ ಹಾಗು ನೊಂದಣಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 9036832467/ 9844432644/ 9880121005/ 9663887496 ಗೆ ಕರೆಮಾಡಿ ನೊಂದಣಿ ಮಾಡಿಸಿಕೊಳ್ಳಬಹುದು
ಸುದ್ದಿಗೋಷ್ಠಿಯಲ್ಲಿ ಆಶಾ ರಘು ಆಚಾರ್, ವಿಶ್ವಕರ್ಮ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷೆ ಸತ್ಯವತಿ, ಅಖಿಲ ಭಾರತ ವಿಶ್ವಕರ್ಮ ಪರಿಷತ್ ಕಾನೂನು ಸಲಹೆಗಾರರಾದ ಸರಸ್ವತಿ, ಮುಖಂಡರಾದ ಕ್ಯಾದಿಗೆರೆ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *