ಹಿರಿಯರನ್ನೂ ಕಾಪಾಡಬಲ್ಲ ಮಾಡೆರ್ನಾ ಕರೊನಾ ಲಸಿಕೆ; ಆರಂಭಿಕ ಪ್ರಯೋಗದಲ್ಲಿ ಯಶಸ್ಸು

ದೇಶ

ನವದೆಹಲಿ:- ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಮಾಡೆರ್ನಾ ಕಂಪನಿ ಮತ್ತೊಂದು ಶುಭ ಸುದ್ದಿ ನೀಡಿದೆ. ತಾನು ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಹಿರಿಯರನ್ನು ಕೋವಿಡ್​ ಸೋಂಕಿನಿಂದ ಕಾಪಾಡಬಲ್ಲುದು ಎಂಬುದು ಫಲಿತಾಂಶದಲ್ಲಿ ಸಾಬೀತಾಗಿದೆ ಎಂದು ಹೇಳಿದೆ. ಕರೊನಾ ವೈರಸ್​ನಲ್ಲಿರುವ ಕೆಲ ಲಕ್ಷಣಗಳನ್ನು ಈ ಲಸಿಕೆ ದೇಹದಲ್ಲಿ ಉಂಟುಮಾಡುತ್ತದೆ. ದೇಹದಲ್ಲಿ ಪ್ರತಿರೋಧ ಶಕ್ತಿ ಉಂಟುಮಾಡುವ ವ್ಯವಸ್ಥೆ ಇದನ್ನು ಗುರುತಿಸುತ್ತದೆ. ಬಳಿಕ ನಮ್ಮಲ್ಲೂ ಅದಕ್ಕೆ ಪ್ರತಿಯಾಗಿ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ ಎಂದು ಮಾಡೆರ್ನಾ ಹೇಳಿದೆ.

 

 

 

Leave a Reply

Your email address will not be published. Required fields are marked *