ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ

ರಾಜಕೀಯ

ಕೊನೆಗೂ ರಾಜ್ಯ ನೂತನ ಸಿಎಂ ಆಗಿ ಸಿದ್ದರಾಮಯ್ಯ ಎರಡನೇ ಅವಧಿಗೆ ಡಿ ಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಸೂಚಿಸಿ ಅಧಿಕಾರ ಹಂಚಿಕೆ ಮಾಡಿದ್ದು, ಸಿಎಂ ಕುರ್ಚಿಯ ಹಗ್ಗ ಜಗ್ಗಾಟಕ್ಕೆ ತೆರೆ ಎಳಿದಿದೆ.

 

 

 

ನಾಳೆ ನೂತನ ಸಿಎಂ ಆಗಿ ಮದ್ಯಾಹ್ನ 3.30 ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜ್ಯದ ಸಾರ್ವತ್ರಿಕ‌ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ದೊಡ್ಡ ಮತ್ತು ಬಹುಮತ ವಿರುವ ಪಕ್ಷವಾಗಿ ಹೊರ ಹೊಮ್ಮಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಘಟನಾ ಚತುರ ಡಿ.ಕೆ. ಶಿವಕುಮಾ ರ್ ಹಾಗೂ ಅಹಿಂದ ವರ್ಗಗಳ ಹಾಗು ಹಿರಿಯ ನಾಯಕ ಸಿದ್ದರಾಮಯ್ಯ ಅವರಿಬ್ಬರು ನಾನು ಸಿಎಂ ಆಗಬೇಕು ಎಂದು ಪಟ್ಟು ಹಿಡಿದಿದ್ದರು, ಈ ಹಿನ್ನೆಲೆಯಲ್ಲಿ ಸಾಲು ಸಾಲು ಸಭೆಗಳನ್ನು ಮಾಡಿದ್ದು, ಇದು ಫಲಿಸದ ಕಾರಣ ಇದನ್ನು ಹೈ ಕಮಾಂಡ್ ಅಂಗಳಕ್ಕೆ ತೆಗೆದುಕೊಂಡು ಹೋಗಿದ್ದರು. ಕಳೆದ ಮೂರು ದಿನಗಳಿಂದ ನೀ ಕೊಡೆ ನಾ ಬಿಡೆ ಎಂಬ ರೀತಿ ಕಗ್ಗಂಟಾಗಿ ಇತ್ತು. ಆದರೆ ಇದು ಕೊನೆಗೆ ಹೈ ಕಮಾಂಡ್ ಬಳಿ ಚರ್ಚಿಸಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಖರ್ಗೆ ಅವರುಗಳು ಇಬ್ಬರ ಮನವೊಲಿಸಿ ಎರಡು ಮತ್ತು ಮೂರು ವರ್ಷಗಳ ಅಧಿಕಾರ ಹಂಚಿಕೆ ಸೂತ್ರವನ್ನು ತಂದು ಮೊದಲ ಎರಡು ವರ್ಷಗಳ ಅವಧಿಗೆ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ ಸೂಚಿಸಿದ್ದಾರೆ. ಉಳಿದ ಮೂರು ವರ್ಷಗಳ ಅವಧಿಗೆ ಡಿ ಕೆ ಶಿವಕುಮಾರ್ ಅವರು ಸಿಎಂ ಆಗಿ ಇರಬೇಕು ಎಂದು ಹೈ ಕಮಾಂಡ್ ನಿರ್ಧರಿಸಿದೆ. ಇದರ ಜೊತೆಗೆ ಇಬ್ಬರಿಗೂ ಕೂಡ ಪಕ್ಷದೊಳಗಿ ರುವ ಚರ್ಚೆಗಳು ಹೊರಗೆ ಬರದಂತೆ ನೋಡಿಕೊ ಳ್ಳುವಂತೆ ಸೋನಿಯಾ ಇಬ್ಬರು ನಾಯಕರಿಗೂ ಸಲಹೆ ನೀಡಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿ ಅವರು ಡಿ ಕೆ ಶಿವಕುಮಾರ್ ಅವರನ್ನು ಸಂತೈಸಿ ಮುಂದಿನ ಅವಧಿಗೆ ನಿಮಗೂ ಅವಕಾಶ ಸಿಗುತ್ತದೆ ಎಂದು ಸಮಾಧಾನ ಮಾಡಿದ್ದಾರೆ. ಇದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದು ಬರಬೇಕು ಎಂಬ ಟಾಸ್ಕ್ ನ್ನು ಹೈಕಮಾಂಡ್ ಇಬ್ಬರಿಗೂ ನೀಡಿದ್ದು ಅಧಿಕಾರದ ಅನುಭವಿಸು ವುದರ ಜೊತೆಗೆ ಟಾಸ್ಕ್ ನ್ನು ಕೂಡ ಪೂರೈಸ ಬೇಕಿದ್ದು ಬಹಳಷ್ಟು ಎಚ್ಚರಿಕೆಯಿಂದ ನಡೆಯಬೇಕಿದೆ

Leave a Reply

Your email address will not be published. Required fields are marked *