ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ನಿಧನ

ರಾಜಕೀಯ

ಮಾಜಿ ಕೇಂದ್ರ ಸಚಿವ, ದೇವರಾಜ್ ಅರಸ್ ವೈದ್ಯಕೀಯ ಕಾಲೇಜ್ ಸಂಸ್ಥಾಪಕ ಅಧ್ಯಕ್ಷ ಆರ್‌ಎಲ್ ಜಾಲಪ್ಪ, ಇಂದು ಅಂಗಾಂಗಳ ವೈಫಲ್ಯದಿಂದ ಬಳಲುತ್ತಿದ್ದು, ಆರ್ ಎಲ್ ಜಾಲಪ್ಪ ವೈದ್ಯಕೀಯ ಆಸ್ಪತ್ರೆಯಲ್ಲಿ ಇಂದು ನಿಧನರಾದರು,

 

 

 

ಆರ್ ಎಲ್ ಜಾಲಪ್ಪ ಅವರು 1952 ರ ಅಕ್ಟೋಬರ್19 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಜನಿಸಿದ್ದರು, ಮೊಟ್ಟ ಮೊದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದರು, ಬಿಎ ಪದವಿಯನ್ನು ಮೈಸೂರು ಮಹಾರಾಜಿನಲ್ಲಿ ಪಡೆದಿದ್ದರು, 1980ರಿಂದ 83 ರವರೆಗೆ ವಿಧಾನಪರಿಷತ್ ಸದಸ್ಯ, 83 ರಿಂದ 96 ವಿಧಾನಸಭಾ ಸದಸ್ಯ,1983-84,ಮತ್ತು 85-86 ರಲ್ಲಿ ಸಹಕಾರ ಮಂತ್ರಿ, 86-87 ಗೃಹ ಮಂತ್ರಿ,1995-96 ರಲ್ಲಿ ಕಂದಾಯ ಸಚಿವ,1996_ರಲ್ಲಿ 11 ನೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾರೆ, 1996-98 ರಲ್ಲಿ ಕೇಂದ್ರ ಜವಳಿ ಸಚಿವರಾಗಿ ಆಯ್ಕೆಯಾಗುತ್ತಾರೆ,1998 ರಲ್ಲಿ ಮರು‌ಚುನಾಯಿತರಾಗುತ್ತಾರೆ,1998-99 ರಲ್ಲಿ ಹಸಕಾಸು ಸಮಿತಿ ಸದಸ್ಯ, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸದಸ್ಯರಾಗಿ ಕೃಷಿ ಸಲಹಾ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು,1999 13 ನೇ ಲೋಕಸಭಾ ಸದಸ್ಯರಾಗಿ ಮರು ಚುನಾಯಿತರಾಗಿದ್ದರು, 2004 -14 ನೇ ಲೋಕಸಭೆಗೆ 4 ನೇ ಬಾರಿ ಆಯ್ಕೆಯಾಗಿದ್ದು, 2006 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರಾಗಿದ್ದರು,

Leave a Reply

Your email address will not be published. Required fields are marked *