ಗುತ್ತಿಗೆ ಪಡೆದು ಬೆಳೆದಿದ್ದ ಟೊಮ್ಯಾಟೋಯಿಂದ ಲಾಸ್ ಅಗಿದ್ದು ಮಾನ ಉಳಿಸಿಕೊಳ್ಳಲು ಸ್ವಂತ ಜಮೀನು ಮಾರಾಟ ಮಾಡಿದ ರೈತ

ಜಿಲ್ಲಾ ಸುದ್ದಿ

ಚಿತ್ರದುರ್ಗ:ರೈತನೊಬ್ಬ ಹುಟ್ಟೂರಿಂದ ಮತ್ತೊಂದು ಊರಿಗೆ ಬಂದು ಸುಮಾರು 25 ಎಕರೆ ಜಮೀನು ಗುತ್ತಿಗೆ ಪಡೆದು ಅದರಲ್ಲಿ 13 ಎಕರೆಯಲ್ಲಿ ಟೊಮೋಟೊ ಬೆಳೆದು, ಸ್ವಂತ ಜಮೀನು ಮಾರಿ ಸಾಲ ತೀರಿಸಿದ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Chitradurga Farmar sell down his own farming land

ಹಿರಿಯೂರು ತಾಲೂಕಿನ ರೈತ ಶಿವಣ್ಣ ಹುಟ್ಟೂರು ಕೋವೇರಹಟ್ಟಿಯನ್ನು ತೊರೆದು ಆಲೂರು ಗ್ರಾಮದಲ್ಲಿ 1.ಲಕ್ಷದ 25 ಸಾವಿರಕ್ಕೆ 25 ಎಕರೆ ಜಮೀನು “ಗುತ್ತಿಗೆ ಪಡೆದ ಜಮೀನಿನಲ್ಲಿ ಹನ್ನೇರಡು ಲಕ್ಷ ರೂಪಾಯಿ ಖರ್ಚ್ ಮಾಡಿ ಟ್ಯಾಮೋಟೋ ಬೆಳೆ ಹಾಗೂ ಐದು ಲಕ್ಷ ರೂಪಾಯಿ ಖರ್ಚ್ ಮಾಡಿ 13 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಕ್ಕೆ ಮಾಡಿದ ಸಾಲ ತೀರಿಸಿ ಮರ್ಯಾದೆ ಉಳಿಸಿಕೊಳ್ಳಲು 20 ಎಕರೆ ಜಮೀನು ಮಾರಾಟ ಮಾಡಿದ್ದಾನೆ.
ತಾಲ್ಲೂಕಿನ ಕೋವೇರಹಟ್ಟಿಯ ಶಿವಣ್ಣ ಎಂಬ ರೈತನು ತಮ್ಮ ಊರಿನ ಜಮೀನಿನಲ್ಲಿ 35 ಎಕರೆಯಲ್ಲಿ ಟೊಮೋಟೊ, ಈರುಳ್ಳಿ ಬಿತ್ತನೆ ಮಾಡಿದ್ದರ ಜೊತೆಗೆ ಆಲೂರಿನಲ್ಲಿ 25 ಎಕರೆ ಜಮೀನು ಗುತ್ತಿಗೆ ಪಡೆದು ಅಲ್ಲಿಯೂ ಟೊಮೆಟೊ ಈರುಳ್ಳಿ ಬೆಳೆದಿದ್ದರು. ಲಾಕ್ ಡೌನ್ ಹೊಡೆತಕ್ಕೆ ಸಿಲುಕಿದ ರೈತನ ಬೆಳೆ ಸಂಪೂರ್ಣ ಹಾಳಾಗುವಂತೆ ಮಾಡಿದ ಮಹಾಮಾರಿ ಕರೋನಾ ಮರ್ಯಾದೆ ಉಳಿಸಿಕೊಳ್ಳಲು 20 ಎಕರೆ ಜಮೀನು ಮಾರುವಂತೆ ಮಾಡಿದೆ ರೈತ ಶಿವಣ್ಣನ ನೋವಿನ ಕಥೆ.

 

 

 

ಹುಟ್ಟುರಿನಿಂದ ಆಲೂರು ಗ್ರಾಮಕ್ಕೆ ಬಂದು 25 ಎಕರೆ ಜಮೀನು ಗುತ್ತಿಗೆ ಪಡೆದು, ಮೊದಲು 13 ಎಕರೆ ಹೊಲದಲ್ಲಿ ಐದು ಲಕ್ಷ ರೂಪಾಯಿ ಖರ್ಚ್ ಮಾಡಿ ಈರುಳ್ಳಿ ಬೆಳೆ ಬೆಳೆದು, ಎರಡೂವರೆ ಲಕ್ಷ ರೂಪಾಯಿ ಆದಾಯ ಬಂದಿತ್ತು. ಉಳಿದ 12 ಎಕರೆಯಲ್ಲಿ ಟೊಮೋಟೊ ಬೆಳೆದು ಒಂದೆರಡು ಕಾಸು ಆದಾಯ ಪಡೆಯೋಣ ಎಂದು ಖುಷಿಯಲ್ಲಿ ಚಳ್ಳಕೆರೆಯಿಂದ 448 ತಳಿಯ ಟೊಮೊಟೊ ಸಾಸಸಿಗಳನ್ನು ನಾಟಿ ಮಾಡಿದ್ದರು. ಟೊಮೋಟೊ ಬಳ್ಳಿಯ ಒಂದೊಂದು ಗಿಡದಲ್ಲಿ 3-5 ಕೆಜಿ ಹಣ್ಣುಗಳು ಬಂದಿದ್ದವು.ಇನ್ನೇನು . ಲಾಭ ಕಾಣುವ ನಿರೀಕ್ಷೆಯಲ್ಲಿದ್ದ ರೈತನ ಮನಸ್ಸಿಗೆ ಲಾಕ್ ಡೌನ್ ಕಣ್ಣೀರು ತರಿಸಿದೆ ಎನ್ನುತ್ತಾರೆ ರೈತ ಶಿವಣ್ಣ.
15 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಹುಟ್ಟುರಾದ ಕೋವೇರಹಟ್ಟಿಯಲ್ಲಿ 60 ಎಕರೆ ಸ್ವಂತ ಜಮೀನಿನಲ್ಲಿ ಟೊಮೊಟೊ, ಈರುಳ್ಳಿ ಬೆಳೆದು 25 ಲಕ್ಷ ಮೈಮೇಲೆ ಬಂದಿದೆ. ಹೀಗಾಗಿ ಜಮೀನು ಮಾರಿ ಕೊಟ್ಟವರ ಸಾಲ ತೀರಿಸಿದ್ದಾನೆ.

 

ಸಂಯುಕ್ತವಾಣಿ

Leave a Reply

Your email address will not be published. Required fields are marked *